ಭಲೆ ಭಲೆ ಚಂದದ...

-ಕೆ. ಕಲ್ಯಾಣ್ 
ಎಲ್ಲ ಶಿಲ್ಪಗಲಿಗೂ ಒಂದೊಂದು ಹಿಂದಿನ ಕಥೆ ಇದೆ 
ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ 

ಭಲೆ ಭಲೆ ಚಂದದ ಚೆಂದುಳ್ಳಿ ಹೆಣ್ಣು ನೀನು 
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು।।
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು 
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು 
ನೀನು ಹೆಜ್ಜೆಯ ಇಟ್ಟಲ್ಲೆಲಾನು ಕಾಲಡಿ ಹೂವಾಗಿ ಬರಬೇಕು 

ತಂಪು ತಂಗಾಳಿಯು ತಂದಾನ ಹಾಡಿತ್ತು, ಕೇಳೋಕೆ ನಾ ಹೋದರೆ 
ನಿನ್ನ ಈ ಸ ರಿ ಗ ಮ ಕೇಳಿತು ಸಮ ಸಮ ಹಂಚಿತು 
ಜುಳು ಜುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ 
ನಿನ್ನದೇ ತಕ ತೈ ಕಂಡಿತು ತಕ ಧಿಮಿ ನೆಚ್ಚಿತು 
ಅಲ್ಲೊಂದು ಸುಂದರ ತೋಟವಿದೆ, ಅಲ್ಲಿ ನೂರಾರು ಹೂಗಳ ರಾಶಿಯಿದೆ 
ಇಲ್ಲೊಂದು ಪ್ರೀತಿಯ ಹಾಡು ಇದೆ, ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ 
ಎಲ್ಲ ಸಾಲಲ್ಲು ಇಣುಕೊ ಅಕ್ಷರ ನಿಂದೇನಾ?
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ!

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ 
ಅಂದವಾ ಹೊಗಳಲು ಸಾಧ್ಯವೇ? ನಿನ್ನ ಮುಂದೆ ಮೌನವೇ!
ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ 
ನಡುವೇ ಉಳುಕುತೆ ಅಲ್ಲವೇ? ನಿನ್ನ ಬಿಟ್ಟರಿಲ್ಲವೇ!
ಅಲ್ಲೊಂದು ರಾಜರ ಬೀದಿ ಇದೆ, ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ 
ಇಲ್ಲೊಂದು ಹೃದಯ ಕೋಟೆ ಇದೆ, ಇಲ್ಲಿ ಎಂತೆಂತ ಕನಸೊ ಕಾವಲಿದೆ 
ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ?
ಹತ್ತಿರ ಇದ್ದರೂ ಭಲು ಎತ್ತರ ಎತ್ತರ ನಿನ್ನಂದ ನಿನ್ನಂದವೇ!

Video link:
https://www.youtube.com/watch?v=LAdF45TzsmE

English lyrics:
http://www.madhurabhavageethegalu.blogspot.com/2016/02/bhale-bhale-chandada.html 

ನಾಯಿ ಮರಿ ನಾಯಿ ಮರಿ...

- ಜಿ. ಪಿ. ರಾಜರತ್ನಂ 
ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?
ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು

ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು 

ನಾಯಿ ಮರಿ ಕಳ್ಳ ಬಂದರೇನು ಮಾಡುವೆ?
ಲೊಳ್ ಲೊಳ್ ಬೌ ಎಂದು ಕೂಗಿ ಆಡುವೆ 

ಜಾಣ ಮರಿ ತಾಳು ಹೋಗಿ ತಿಂಡಿ ತರುವೆನು 
ತಾ ನಿನ್ನ ಮನೆಯ ನಾನು ಕಾಯುತಿರುವೆನು 

Video link:
https://www.youtube.com/watch?v=NRZP6b16Lmo
English lyrics:
http://www.madhurabhavageethegalu.blogspot.com/2015/06/nayi-mari-nayi-mari.html

ನನ್ನ ಬಾಳಿನ ಇರುಳ...

- ಎಚ್. ಎಸ್. ವೆಂಕಟೇಶ್ ಮೂರ್ತಿ 
ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ 
ಕೆಂಪು ತುಟಿಗಳ ಹವಳ ಬೆಳಗಲೆಬೇಕು ||

ಕವಿದಿರುವ ಮೋಡಗಳ ಸೀಳಿಹಾಕಲು ಅವಳ 
ಕಣ್ಣ ಸುಳಿ ಮಿಂಚುಗಳು ಹೊಳೆಯಲೆಬೇಕು

ಒಣಗಿದ ಎದೆಯ ನೆಲ ನೆನೆಯಲು ನನ್ನವಳ 
ಆನಂದ ಭಾಷ್ಪಗಳ ಮಳೆಯಾಗಬೇಕು 

ನನ್ನ ಬಾನಿನ ನೀಲಿ ನನ್ನವಳ ಕಣ್ಣಾಲಿ 
ಚಂದ್ರಿಕೆಯ ಸುಧೆಯಲ್ಲಿ ತೋಯಲೆಬೇಕು 

Video link:
https://www.youtube.com/watch?v=LMKS9Y2_I1Y
English lyrics:
http://www.madhurabhavageethegalu.blogspot.com/2015/06/nanna-balina-irula.html

ತೂರಿ ಬಾ ಜಾರಿ ಬಾ...

- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ್ 
ತೂರಿ ಬಾ ಜಾರಿ ಬಾ
ಮುಗಿಲ ಸಾರವೆ ಬಾ ಬಾ
ಸುರಿದು ಬಾ ಹರಿದು ಬಾ
ಜಲರೂಪಿ ಒಲವೆ ಬಾ ಬಾ ।।

ಬಾನ ಕಡೆಗೆ ಕೈಯ ನೀಡಿ
ಮುಗಿಲ ನಡೆಗೆ ಕಣ್ಣ ಹೂಡಿ
ಬಾಯಿ ತೆರೆದು ನಿಂತ ನೆಲದ
ಉರಿವ ದಾಹ ಶಮನ ಮಾಡಿ
ಮಣ್ಣಿನ ಧಗೆ ತಣಿಸುತ್ತ
ತಣ್ಣನೆ ಸುಧೆ ಉಣಿಸುತ್ತ
ದಿವದ ವರವಾಗಿ ಚೆಲ್ಲಿ ಬಾ
ಭವಕೆ ನೆರವಾಗಿ ನಿಲ್ಲು ಬಾ

ಮಿಂಚು ಹೊಳೆಸಿ ಗುಡುಗು ನುಡಿಸಿ
ಗಿರಿಮುಡಿಗೆ ಅಭಿಷೇಕ ಹರಿಸಿ
ಗಾಳಿ ಆನೆಯ ಬೆನ್ನ ಏರಿ
ಮಾಡಿ ಮೋಜಿನ ಸವಾರಿ
ಬಿಸಿಲ ತಲೆ ಹಾರಿಸಿ
ಹಸಿರ ಧ್ವಜ ಏರಿಸಿ
ನೆಲಕೆ ಉಸಿರಾಗಿ ಇಳಿದು ಬಾ
ಇಳೆಗೆ ಬಾಳನ್ನು ತೊಳೆದು ಬಾ

Audio link:
http://www.kannadaaudio.com/Songs/Bhaavageethe/home/Deepika.php
English lyrics:
http://www.madhurabhavageethegalu.blogspot.com/2015/03/toori-baa-jaari-baa.html