- ಕುವೆಂಪು
ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ ||
ಬಿಸಿಲಿದು ಬರಿ ಬಿಸಿಲಲ್ಲೊವೋ ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲೊವೋ ಆ ಭ್ರಾಂತಿಯ ಮಾಣೋ
ರವಿವಧನವೆ ಶಿವ ಸಧನವೋ ಬರಿ ಕಣ್ಣದು ಮಣ್ಣೋ
ಶಿವನಿಲ್ಲದೆ ಸೌಂದರ್ಯವೇ ಶವಮುಖದ ಕಣ್ಣೋ
ಉದಯದೊಳೇನ್ ಹೃದಯವ ಕಾಣ್ ಅದೇ ಅಮೃತದ ಹಣ್ಣೋ
ಶಿವ ಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ
Video link:
http://www.youtube.com/watch?v=EsLnWdKiUw0
English lyrics:
http://madhurabhavageethegalu.blogspot.com/2012/07/anandamaya-ee-jagahrudaya.html
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಸಾರ್ .
ReplyDeleteನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ , ನಮ್ಮಂಥಹ ಕನ್ನಡ ಶ್ರೋತೃಗಳಿಗೆ ಇದು ಬಹಳ ಉಪಯುಕ್ತ .
ನಿಮ್ಮ ಪ್ರೋತ್ಸಾಹಪೂರ್ವಕ ಮಾತುಗಳಿಗಾಗಿ ತುಂಬಾ ಧನ್ಯವಾದಗಳು.
Delete