ಇನ್ನು ಯಾಕ ಬರಲಿಲ್ಲವ್ವ...

- ದ. ರಾ. ಬೇಂದ್ರೆ
ಇನ್ನು ಯಾಕ ಬರಲಿಲ್ಲವ್ವ ಹುಬಳ್ಳಿಯಾವಾ ?
ವಾರದಾಗ ಮೂರು ಸರ್ತಿ ಬಂದು ಹೋದವಾ ||

ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡವ
ತುಂಬ ಮೀಸಿ ತೀಡಿಕೋತ ಹುಬ್ಬ ಹಾರ್ಸಾವಾ
ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡವಾ
ಏನೋ ಅಂದರೆ ಏನೋ ಕಟ್ಟಿ ಹಾಡ ಹಾಡವಾ

ಇರು ಅಂದರ ಬರತೇನಂತ ಎದ್ದು ಹೊರಡಾವಾ
ಮಾರಿ ತಿಳಗ ಹಾಕಿತೆಂದರೆ ಎದ್ದು ಬಿಡಾವಾ
ಹಿಡೀ ಹಿಡೀಲೆ ರೊಕ್ಕ ತೆಗದು ಹಿಡಿ ಹಿಡಿ ಅನ್ನಾವಾ
ಖರೆ ಅಂತ ಕೈ ಮಾಡಿದರ ಹಿಡೇದು ಬೀಡಾವ

ಚಹಾದ ಜೋಡಿ ಚೂಡದಾಂಗ ನೀ ನನಗಂದಾವಾ
ಚೌಡಿಯಲ್ಲ ನೀ ಚೂಡ ಮಣಿಯಂತ ರಮೀಸಿ ಬಂದಾವಾ
ಬೆರಳಿಗುಂಗುರ ಮೂಗಿನಾಗ ಮೂಗಬಟ್ಟಿಟ್ಟಾವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾವಾ

ಎಲ್ಲಿ, ಮಲ್ಲಿ, ಪಾರಿ, ತಾರಿ ನೋಡಿರೇನ್ರವ್ವ ?
ನಿಂಗಿ, ಸಂಗೀ, ಸಾವಂತರಿ ಎಲ್ಹಾನ ನನ್ನಾವಾ ?
ಸೆಟ್ಟರ ಹುಡುಗ ಸೆಟಗೊಂಡೋದ ಅಂತ ನನ ಜೀವಾ
ಹಾದಿ ಬೀದಿ ಹುಡಕ ತೈತೆ ಬಿಟ್ಟ ಎಲ್ಲ ಹ್ಯಾವಾ

Video link:
http://www.youtube.com/watch?v=l1WR1kCE5ng 
English lyrics:
http://www.madhurabhavageethegalu.blogspot.com/2012/10/innu-yaka-baralillavva.html

2 comments:

  1. Ananta koti dhanyavaadagalu!

    ReplyDelete
    Replies
    1. Nanna blog-gige bandidakke nimage koTi dhanyavaadagalu !

      Delete

Note: Only a member of this blog may post a comment.