ಬಾಳೊಂದು ಭಾವಗೀತೆ...

- ಆರ್. ಎನ್. ಜಯಗೋಪಾಲ್
ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ
ಬಡವ ಬಲ್ಲಿದ ಬೇದವಿಲ್ಲದ ಭೂಲೋಕ ಸ್ವರ್ಗವಿದಂತೆ ||

ಹಣದಲ್ಲಿ ಅರಸಿದೆ ಶಾಂತಿ ಬರಿದೆನ್ನ ಮನಸಿನ ಬ್ರಾಂತಿ
ಮಮತೆ ಪ್ರೀತಿ ಸಹನೆ ಶಾಂತಿ ಬಾಳನು ಬೆಳಗುವ ಜ್ಯೋತಿ

ಮನದಲ್ಲಿ ತುಂಬಿರೆ ಒಲವು ಮನೆಯಲ್ಲಿ ಸಂತಸ ಗೆಲುವು
ನಗುವೇ ನಗವು ನಲಿವೇ ಜಗವು ಜೀವನ ಸೊಬಗಿನ ಹೂವು

ಉರಿದಾಗ ಪ್ರೇಮದ ಹಣತೆ ನಮಗಿಲ್ಲ ಯಾವುದು ಕೊರತೆ
ಮಹಡಿಯ ಮಹಲು ಮುರುಕು ಗುಡಿಸಲು ಬೆರತ ಜೀವಕೆ ಒಂದೇ

Video link:
http://www.youtube.com/watch?v=lmSkb31lWSI  
English lyrics:
http://www.madhurabhavageethegalu.blogspot.com/2012/10/baalondu-bhavageethe.html

No comments:

Post a Comment

Note: Only a member of this blog may post a comment.