ತೂಗುವೆ ರಂಗನ

- ಚಿ. ಉದಯಶಂಕರ್ 
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೊಜೋ ಹಾಡುವೆ ||

ಮೇಲುಕೋಟೆಯ ಸ್ವಾಮಿ ಚೆಲುವರಾಯನ
ಬೇಲೂರ ಶ್ರೀ ಚೆನ್ನ ಕೇಶವನ
ಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನ

ಕಣ್ಣಲ್ಲೆ ಹುಣ್ಣಿಮೆ ತಂದವನ
ನಗುವಲ್ಲೆ ಇಲ್ಲಿಗೆ ಚೆಲ್ಲುವನ
ಚೆಲುವಲ್ಲೆ ತಾವರೆಯ ನಾಚಿಸುವನ
ಈ ಮನೆಯ ಬೆಳಕಾಕಿ ಬಂದವನ

ಹಾಲದೆಲೆಯ ಮೇಲೆ ಮಲಗಿದವನ
ಹತ್ತವ ಕಾಗದ ಪರಮಾತ್ಮನ
ಮತ್ತೆ ನಮಗಾಗಿಳೆಗೆ ಬಂದವನ
ಜಗವನ್ನೆ ತೂಗುವ ಜಗದೀಶನ

Video link:
http://www.youtube.com/watch?v=q5TURp-4rVM
English lyrics:
http://madhurabhavageethegalu.blogspot.com/2012/07/tooguve-rangana.html

No comments:

Post a Comment

Note: Only a member of this blog may post a comment.