ನನ್ನ ಇನಿಯನ ನೆಲೆಯ...

- ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ನನ್ನ ಇನಿಯನ ನೆಲೆಯ ಬಲ್ಲೆಯೇನೆ ?
ಹೇಗೆ ತಿಳಿಯಲಿ ಅದನು ಹೇಳೇ ನೀನೆ ||

ಇರುವೆ ಸರಿಯುವ ಸದ್ದು ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳ ಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ ?

ಗಿರಿಯ ಎತ್ತಲು ಬಲ್ಲ ಶರದಿ ಬಗ್ಗಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸ ಬಲ್ಲ
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ ?

ನೀರು ಮುಗಿಲಾದವನು ಮುಗಿಲು ಮಳೆಯಾದವನು
ಮಳೆ ಬಿದ್ದು ತೆನೆ ಎದ್ದು ತೂಗುವವನು
ನನ್ನೀ ಅಳಲನು ಏಕೆ ತಿಳಿಯದವನು ?

Video link:
http://www.youtube.com/watch?v=tINy92VIrhY 
English lyrics:
http://madhurabhavageethegalu.blogspot.com/2012/07/nanna-iniyana-neleya.html

No comments:

Post a Comment

Note: Only a member of this blog may post a comment.