ಮುಚ್ಚುಮರೆ ಇಲ್ಲದೆಯೆ...

- ಕುವೆಂಪು
ಮುಚ್ಚುಮರೆ ಇಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆವೋ ಗುರುವೆ ಅಂತರಾತ್ಮ ||
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸುವೋ ಗುರುವೆ ಅಂತರತ್ಮಾ

ರವಿಗೆ ಕಾಂತಿಯ ನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ
ಗಂಗೆ ತಾನುಢ್ಭವಿಪ ನಿನ್ನಡಿಯ ಸೋಕಿಂಗೆ
ನರಕ ತಾನುಳಿಯುವುದೆ ನರಕವಾಗಿ

ಸಾಂತ ರೀತಿಯನೆಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ
ನಿನ್ನ ಪ್ರೀತಿಯ ಬೆಳಕಿನಾ ಆನಂದ ಪೈರ್

Video link:
http://www.youtube.com/watch?v=LB1lkbEhpOY
English lyrics:
http://www.madhurabhavageethegalu.blogspot.com/2012/06/muchchumare-illadeye.html

No comments:

Post a Comment

Note: Only a member of this blog may post a comment.