ಆರಿಗೆ ವಧುವಾದೆ...

- ಪುರಂದರ ದಾಸ
ಆರಿಗೆ ವಧುವಾದೆ ಅಮ್ಬುಜಾಕ್ಷಿ
ಕ್ಷೀರಬ್ಧಿ ಕನ್ನಿಕೆ ಶ್ರೀ ಮಹಾಲಕುಮಿ ||

ಶರಧಿ ಬಂಧನ ರಾಮಚಂದ್ರ ಮೂರುತಿಗೊ
ಪರಮಾತ್ಮ ಅನಂತ ಪದ್ಮನಾಭನಿಗೊ
ಸರಸಿಜನಾಭ ಜನಾರ್ಧನ ಮೂರುತಿಗೊ
ಎರಡು ಹೊಳೆಯ ರಂಗ ಪಟ್ಟಣ ವಾಸನಿಗೊ

ಚೆಲುವ ಬೇಲೂರು ಚೆನ್ನಿಗರಾಯನಿಗೊ
ಗೆಳತಿ ಹೇಳು ಉಡುಪಿಯ ಕೃಷ್ಣರಾಯನಿಗೊ
ಇಳೆಯಾಳು ಪಂಡರಾಪುರ ವಿಠಲೇಶಗೊ
ನಳಿನಾಕ್ಷಿ ಪೇಳು ಬದರಿ ನಾರಾಯಣಗೊ

ಮಲಯ ಜಗಂಧಿ ಬಿಂಧು ಮಾಧವರಾಯಗೊ
ಸುಲಭ ದೇವರ ದೇವ ಪುರುಶೋತಮಗೊ
ಫಲದಾಯಕ ನಿತ್ಯ ಮಂಗಳ ನಾಯಕಗೊ
ಚೆಲುವೇ ನಾಚದೆ ಪೇಳು ಶ್ರೀ ವೆಂಕಟೇಶಗೊ

ವಾಸವಾರ್ಚಿತ ಕಂಚಿ ವರದರಾಜನಿಗೊ
ಅಸುರದಿ ಶ್ರೀ ಮುಷ್ಣ ವರಾಹನಿಗೊ
ಶೇಷಶಾಯಿಯಾದ ಶ್ರೀಮಾನ್ ನಾರಾಯಣಗೊ
ಸಾಸಿರ ನಾಮದೊಡೆಯ ಅಳಗಿರೀಶಗೊ

ಶರಣಗತ ಪೊರೆವ ಸಾರಂಗ ಪಾನಿಗೊ
ವರಗಳ ನೀವ ಶ್ರೀನಿವಾಸಗೊ
ಕುರುಕುಲಾಂತಕ ನಮ್ಮ ರಾಜ ಗೋಪಾಲಗೊ
ಸ್ಥಿರವಾಗಿ ಪೇಳು ಪುರಂದರ ವಿಠಲ ರಾಯನಿಗೊ

Video link:
http://www.youtube.com/watch?v=-h3gqnmM7GE
English lyrics:
http://www.madhurabhavageethegalu.blogspot.com/2012/08/yarige-vadhuvade.html

No comments:

Post a Comment

Note: Only a member of this blog may post a comment.