ಇದೇ ನಾಡು ಇದೇ ಭಾಷೆ...

- ಚಿ. ಉದಯಶಂಕರ್
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ ||

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿ ವಾಣಿಯ ನಾಡು

ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ
ಶ್ರಿಂಗೇರಿ ಶಾರದೆ ವೀಣೆ ರಸ ತುಂಗೆ ಆಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು

ಏಳೇಳು ಜನ್ಮವೆ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೆ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ

Video link:
http://www.youtube.com/watch?v=55sGO-pRivA 
English lyrics:
http://www.madhurabhavageethegalu.blogspot.com/2012/10/ide-naadu-ide-bashe.html

2 comments:

  1. ಕನ್ನಡದಲ್ಲಿ ಬರೆದಿರುವ ಹಾಡಿನ ಸಾಹಿತ್ಯಕ್ಕಾಗಿ ಧನ್ಯವಾದಗಳು.

    ReplyDelete
    Replies
    1. ನಿಮ್ಮ ಪ್ರೋತ್ಸಾಹ ಪೂರ್ವಕ ಮಾತುಗಳಿಗೆ ಧನ್ಯವಾದಗಳು.

      Delete

Note: Only a member of this blog may post a comment.