ಕೋಡಗನ ಕೋಳಿ...

- ಶಿಶುನಾಳ ಶರೀಫ
ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತ ! ||

ಆಡು ಆನೆಯ ನುಂಗಿ, ಗೋಡೆ ಸುಣ್ಣಾವ ನುಂಗಿ !
ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತ !

ಒಳ್ಳು ಒನಕೆಯ ನುಂಗಿ, ಕಲ್ಲು ಗೂಟಾವ ನುಂಗಿ !
ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತ !

ಹಗ್ಗ ಮಗ್ಗಾವ ನುಂಗಿ, ಮಗ್ಗಾವ ಲಾಲಿ ನುಂಗಿ !
ಮಗ್ಗದಾಗಿರುವ ಅಣ್ಣಾನನ್ನೇ ಮಣಿಯು ನುಂಗಿತ್ತ !

ಗುಡ್ಡ ಗವಿಯನ್ನು ನುಂಗಿ, ಗವಿಯು ಇರುವೇಯ ನುಂಗಿ !
ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತ !

Video link:
http://www.youtube.com/watch?v=BpqCyoSAjtw
English lyrics:
http://www.madhurabhavageethegalu.blogspot.com/2012/06/kodagana-koli-nungitta.html

No comments:

Post a Comment

Note: Only a member of this blog may post a comment.