ಒಂದೇ ಬಾರಿ ನನ್ನ...

- ದ.ರಾ. ಬೇಂದ್ರೆ
ಒಂದೇ ಬಾರಿ ನನ್ನ ನೋಡಿ ಮಂದ ನಾಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ, ಗೆಳತಿ ಹಿಂದ ನೋಡದ ||

ಗಾಳಿ ಹೆಜ್ಜಿ ಹಿಡದ ಸುಗಂಧ ಅತ್ತ ಅತ್ತ ಹೋಗುವಂಗ
ಹೋತ ಮನಸು ಅವನ ಹಿಂದ ಹಿಂದ ನೋಡದ, ಗೆಳತಿ ಹಿಂದ ನೋಡದ

ನಂದ ನನಗ ಎಚ್ಚರಿಲ್ಲ ಮಂದಿ ಗೊಡವಿ ಏನ ನನಗ ?
ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ, ಗೆಳತಿ ಹಿಂದ ನೋಡದ

ಸೂಜಿ ಹಿಂದ ದಾರದಾಂಗ ಕೊಳದೊಳಗ ಜಾರಿಧಾಂಗ
ಹೋತ ಹಿಂದ ಬಾರದಾಂಗ ಹಿಂದ ನೋಡದ, ಗೆಳತಿ ಹಿಂದ ನೋಡದ

Video link:
http://www.youtube.com/watch?v=5oUSphxJO1Y
English lyrics:
http://www.madhurabhavageethegalu.blogspot.com/2012/06/onde-baari-nanna.html

No comments:

Post a Comment

Note: Only a member of this blog may post a comment.