ಇಳಿದು ಬಾ ತಾಯಿ...

- ದ.ರಾ. ಬೇಂದ್ರೆ
ಇಳಿದು ಬಾ ತಾಯಿ ಇಳಿದು ಬಾ ||

ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ ದಿಗಂತದಲಿ ಹನಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ, ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೂಡಮಾಡುವೆ ನಿನ್ನ ನುಡುತಡುವೆ ಏಕೆ ತಡೆತಡೆವಿ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ, ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ, ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ, ಉದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ, ವಾತ್ಸಲ್ಯ ವರಣೆ ಇಳಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ
ಸಿರಿವಾರಿಜಾತ ವರಪಾರಿಜಾತ ತಾರ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ

ಬಂದಾರೆ ಬಾರೆ ಒಂದಾರೆ ಸಾರೆ ಕಂಧಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ

ದುಮು ದುಮು ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ, ಬಾಳು ಬೆಳಕಾಗಿ ಬೆಳೆದು ಬಾ
ಶಂಭು ಶಿವಹರನ ಚಿತ್ತೇ ಬಾ, ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯ ನತ್ತೆ ಬಾ, ಇಳಿದು ಬಾ ತಾಯಿ ಇಳಿದು ಬಾ

Video link:
http://media.tumkuronline.com/video/989/ilidu-baa-thayi-Arishina-Kunkuma-P-B-srinivas
Audio link:
http://ww.raaga.com/play/?id=198364
English lyrics:
http://www.madhurabhavageethegalu.blogspot.com/2012/07/ilidu-baa-taye.html

2 comments:

 1. found it on music india online webiste :
  http://mio.to/genre/30-kannada/#/album/107-Kannada_Compilation/19285-Suvvi_Suvvi_Suvvale_-_Kannada_Kanda_Dr_Rajkumar/

  song #32 in that list

  ReplyDelete
  Replies
  1. Thank you, Vikas! I have updated the post with another audio link which I found on Raaga.com. This will give our friends more options.

   Delete

Note: Only a member of this blog may post a comment.