ಯಾವ ಜನ್ಮದ ಮೈತ್ರಿ...

- ಕುವೆಂಪು
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂದಿಸಿಹುದೋ ಕಾಣೆ ||
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಗುರುದೇವನಾಣೆ, ಓ! ನನ್ನ ನೆಚ್ಚಿನ ಬಂಧು

ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿದೆ ಪ್ರೇಮ ತೀರ್ಥದಿ ಮಿಂದು

ಅದರರ್ಥಗಿರ್ಥಗಳು ಶ್ರುಷ್ಟಿಕರ್ತಾನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ ?
(ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೇ ?)
(ಹಾದಿ ಸಾಗಿದರಾಯ್ತು ಬರುವುದೆಲ್ಲ ಬರಲಿ)
ಬಾರಯ್ಯ ಮಮಬಂಧು ಜೀವನ ಪತದೊಳಾವು
ಒಂದಾಗಿ ಮುಂದುವರೆಯುವ (ಹಿಂದಿರಲಿ ಸಾವು)

Video link:
http://www.youtube.com/watch?v=sDLaWk8Lznk
English lyrics:
http://madhurabhavageethegalu.blogspot.com/2012/07/yaava-janmada-maitri.html

P.S: words in Italic are not included in movie version of the song 

No comments:

Post a Comment

Note: Only a member of this blog may post a comment.