ಆನಂದಮಯ ಈ...

- ಕುವೆಂಪು
ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ ||

ಬಿಸಿಲಿದು ಬರಿ ಬಿಸಿಲಲ್ಲೊವೋ ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲೊವೋ ಆ ಭ್ರಾಂತಿಯ ಮಾಣೋ

ರವಿವಧನವೆ ಶಿವ ಸಧನವೋ ಬರಿ ಕಣ್ಣದು ಮಣ್ಣೋ
ಶಿವನಿಲ್ಲದೆ ಸೌಂದರ್ಯವೇ ಶವಮುಖದ ಕಣ್ಣೋ

ಉದಯದೊಳೇನ್ ಹೃದಯವ ಕಾಣ್ ಅದೇ ಅಮೃತದ ಹಣ್ಣೋ
ಶಿವ ಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ

Video link:
http://www.youtube.com/watch?v=EsLnWdKiUw0
English lyrics:
http://madhurabhavageethegalu.blogspot.com/2012/07/anandamaya-ee-jagahrudaya.html

2 comments:

 1. ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಸಾರ್ .
  ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ , ನಮ್ಮಂಥಹ ಕನ್ನಡ ಶ್ರೋತೃಗಳಿಗೆ ಇದು ಬಹಳ ಉಪಯುಕ್ತ .

  ReplyDelete
  Replies
  1. ನಿಮ್ಮ ಪ್ರೋತ್ಸಾಹಪೂರ್ವಕ ಮಾತುಗಳಿಗಾಗಿ ತುಂಬಾ ಧನ್ಯವಾದಗಳು.

   Delete

Note: Only a member of this blog may post a comment.