ಹೂವು ಹೊರಳುವವು ಸೂರ್ಯನ...

- ಚೆನ್ನವೀರ ಕಣವಿ
ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನ ವರೆಗೆ ||
ಇರುಳಿನ ಒಡಲಿಗೆ ದೂರದ ಕಡಲಿಗೆ
ಮುಳುಗಿದಂತೆ ದಿನಬೆಳಗಿದಂತೆ ಹೊರ ಬರುವನು ಕೂಸಿನ ಹಾಗೆ

ಜಗದ ಮೂಸೆಯಲಿ ಕರಗಿಸಿ ಬಿಡುವನು ಎಲ್ಲ ಬಗೆಯ ಸರಕು
ಅದಕೆ ಅದರ ಗುಣ ದೋಷಗಳಂಟಿಸಿ ಬಿಡಿಸಿ ಬಿಟ್ಟ ತೊಡಕು

ಗಿಡದಿಂದುದುರುವ ಎಲೆಗಳಿಗೂ ಮುದ ಚಿಗುರುವಾಗಲು ಒಂದೇ ಹದ
ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೋ ಕಲಾವಿದ?

ಬಿಸಿಲ ದಗೆಯ ಬಸಿರಿಂದಲಿ ಸುಳಿವುದು ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ ಸಂಕಟವನು ಸೊಸಲು ಬಂದೆ ಬರುವುದಾ ಗಳಿಗೆ
 
ಸಹಜ ನಡೆದರು ಭೂಮಿಯ ಲಯದಲಿ ಪದಗಳ ನಿರಿಸಿದ ಹಾಗೆ
ವಿಶ್ವದ ರಚನೆಯ ಮೊಳಹಿನಲ್ಲಿ ಕಂಗೊಳಿಸಿತು ಕವಿತೆಯು ಹೀಗೆ

Video link:
http://www.youtube.com/watch?v=KnRSNAuG_LA
English lyrics:
http://www.madhurabhavageethegalu.blogspot.com/2012/06/hoovu-horaluvavu.html

2 comments:

  1. tumbaa chennagide. tumbu dhanyavaadagalu
    sunanda sharma

    ReplyDelete
    Replies
    1. Dhanyavaada, matthe nanna blog-gige bETi koDi.

      Delete

Note: Only a member of this blog may post a comment.