ಯಾವ ಮೋಹನ ಮುರಳಿ...

- ಗೋಪಾಲ ಕೃಷ್ಣ ಅಡಿಗ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ||
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಳದಿ ರಿಂಗಣ

ಸಪ್ತ ಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ

ವಿವಶವಾಯಿತು ಪ್ರಾಣ ಹ! ಪರವಶವು ನಿನ್ನೀ ಚೇತನ
ಇರುಹುದೆಲ್ಲವ ಬಿಟ್ಟು ಇರದುದದೆಡೆಗೆ ತುಡಿಹುದೆ ಜೀವನ

ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು

Video link:
http://www.youtube.com/watch?v=Mx2i_Y9esVs 
English lyrics:
http://www.madhurabhavageethegalu.blogspot.com/2012/06/yava-mohana-murali.html

No comments:

Post a Comment

Note: Only a member of this blog may post a comment.