ಆರು ಹಿತವರು...

- ಪುರಂದರದಾಸ
ಆರು ಹಿತವರು ನಿನಗೆ ಈ ಮೂವರೊಳಗೆ ||
ನಾರಿಯೋ ಧಾರುಣಿಯೋ ಬಲುಧನದ ಸಿರಿಯೋ

ಮುನ್ನಶಥಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರಸಿ
ಬಿನ್ನಣದ ಮನೆಕಟ್ಟಿ ಕೋಟೆಕೊತ್ತಳವಿಕ್ಕಿ
ಚೆನ್ನಿಗನು ಅಸುವಳಿಯೆ ಹೊರಗೆ ಹಾಕುವರು

ಉದ್ಯೋಗ ವ್ಯವಹಾರ ನೃಪಸೇವೆ ಕುಶಲಗತಿ
ಶುದ್ರತನ ಕಳವೂ ಪರದ್ರೋಹದಿಂದ
ಬುದ್ಧಿಯಿಂದಲಿ ಗಳಿಸಿ ಇಟ್ಟಿದ ಅರ್ಥವನು
ಸತ್ಯದಲಿ ಆರು ಉಮ್ಬುವರು ಪೆಳೋ ಮನುಜ

Video link:
http://www.youtube.com/watch?v=KOGEGZZNXJw
English lyrics:
http://www.madhurabhavageethegalu.blogspot.com/2012/06/aaru-hithavaru-ninage.html

No comments:

Post a Comment

Note: Only a member of this blog may post a comment.