ಮುಂಗಾರಿನ ಅಭಿಷೇಕಕೆ...

- ಜಿ.ಎಸ್. ಶಿವರುದ್ರಪ್ಪ
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ||

ಬಾಯಾರಿದ ಬಯಕೆಗಳಲಿ ತಳ ತಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿಯಂತ ಹಸಿರು

ಮೈ ಮನಗಳ ಕೊಂಬೆಯಲ್ಲಿ ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ ಕನಸಿನ ಹೂವರಳುವ ತಂಪು

ಭರವಸೆಗಳ ಹೊಲಗಳಲ್ಲಿ ನೇಗಿಲ ಗೆರೆ ಕವನ
ಶ್ರಾವಣದಲಿ ತೆನೆದೂಗುವ ಜೀವೋತ್ಸವ ಗಾನ

Video link:
http://www.youtube.com/watch?v=gaWa_YLL09w
English lyrics:
http://www.madhurabhavageethegalu.blogspot.com/2013/05/mungarina-abhishekake.html

No comments:

Post a Comment

Note: Only a member of this blog may post a comment.