ಉಡುಗಣ ವೇಷ್ಟಿತ...

- ಜಿ. ಯೆಸ್. ಶಿವರುದ್ರಪ್ಪ 
ಉಡುಗಣ ವೇಷ್ಟಿತ ಚಂದ್ರ ಸುಶೋಭಿತ
ದಿವ್ಯಾಂಬರ ಸಂಚಾರಿ
ಕಣ್ಣ ನೀರಿನಲಿ ಮಣ್ಣ ಧೂಳಿನಲಿ
ಹೊರಳುತ್ತಿರುವರ ಸಹಚಾರಿ ||

ಕೋಟಿ ಸೂರ್ಯಕರ ತೇಜ ಪುಂಜತರ
ವಿದ್ಯುತ್ತ್ರಾಜಿತ ರಥಗಾಮಿ
ಉಳುತಿಹ ರೈತನ ನೇಗಿಲ ಸಾಲಿನ
ಮಣ್ಣಿನ ರೇಖಾ ಪಥಗಾಮಿ

ಬಾಂದಳ ಚುಂಬಿತ ಶುಭ್ರ ಹಿಮಾವೃತ
ತುಂಗ ಶೃಂಗದಲಿ ಗೃಹವಾಸಿ
ದೀನ ಅನಾಥರ ದುಃಖಿದರಿದ್ರರ
ಮುರುಕು ಗುಡಿಸಿಲಲಿ ಉಪವಾಸಿ

Video link:
http://www.youtube.com/watch?v=vbGV4G6D_w4
English lyrics:
http://www.madhurabhavageethegalu.blogspot.com/2014/02/udugana-veshtita.html
 

No comments:

Post a Comment

Note: Only a member of this blog may post a comment.