ಓ! ಪುಟಾಣಿ ನೀಲಿ...

- ಎಚ್. ಎಸ್. ವೆಂಕಟೇಶಮೂರ್ತಿ
ಓ! ಪುಟಾಣಿ ನೀಲಿ ಹಕ್ಕಿ, ಹಾಡು ಹಾಡು ಹಾಡು ಹಾಡು ||

ಚಂದ್ರ ಇದಾನೆ ಬಾನಲ್ಲಿ ಬೆಳದಿಂಗಳು ಈ ಕಾನಲ್ಲಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ

ಅಲೆ ಯಾಡುತಿವೆ ಕೊಳದಲ್ಲಿ ತೆನೆ ತೂಗುತ್ತಿವೆ ಹೊಲದಲ್ಲಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ

ಬೆಳಕ್ಕಿಗಳಿವೆ ಸರದಲ್ಲಿ  ಗಿಳಿಗಳು ಹಚ್ಚನೆ ಮರದಲ್ಲಿ
ನೀಲಿಯೊಳಾಡುವ ನೀಲಿಯ ಹಕ್ಕಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ

Video link:
http://www.youtube.com/watch?v=WIJkJRfw0h4
English lyrics:
http://www.madhurabhavageethegalu.blogspot.com/2012/07/o-putani-neeli-hakki.html

No comments:

Post a Comment

Note: Only a member of this blog may post a comment.