ನಿನ್ನ ಹೂ ಬನದಲ್ಲಿ...

- ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ
ನಿನ್ನ ಹೂ ಬನದಲ್ಲಿ ಮಾಲಿ ಮಾಡಿಕೊ ನನ್ನ
ಕನ್ನಯ್ಯ, ಓ! ಕನ್ನಯ್ಯ ||
ನಿನ್ನ ಶ್ರೀ ಚರಣಗಳ ಹಾಡಿ ಬೆಳೆಸುವೆ ವನವ
ಕನ್ನಯ್ಯ, ನನ್ನ ಕನ್ನಯ್ಯ

ಕನಕಾಂಬರೀ ಬಣ್ಣ ಸೀರೆಯನ್ನುಡುವೆ
ಬಣ್ಣ ಬಣ್ಣದ ಗಿಡವ ಪಾತಿಯಲಿ ನೆಡುವೆ
ಸೇವೆಯಾನಂದವೇ ಕೂಲಿ ನನಗೆನುವೆ
ಹೂ ಬೆಳೆಸಿದುದೆ ಭಾರಿ ಜಹಗೀರಿ ಎನುವೆ

ನವಿಲು ಗರಿಯ ಕಿರೀಟ ಪೀತಾಂಬರ
ಮುಗಿಲ ನೀಲಿಯ ಎದೆಗೆ ಮಿಂಚಿನ ಸರ
ಭಾವ ಬಂಗಾರ ಓ! ಕೃಷ್ಣ ಲಾಲ
ಹೇಗೆ ಅರಿಯಲೊ ನಿನ್ನ ಪ್ರೇಮ ಜಾಲ

ಸಾಧು ಜನ ದಿನ ದಿನವು ಬೃಂದಾವನಕ್ಕೆ
ಸಾಗುವರು ಕೃಷ್ಣನ ಕಾಣಲಿಕ್ಕೆ
ಮೀರಳಾ ಹೃದಯವೇ ಬೃಂದಾವನ
ಸಿಗುವನೋ ಗಿರಿಧರ ಬಯಸಿದ ಕ್ಷಣ

Video link:
http://www.youtube.com/watch?v=Q8CTy93FmF8  
English lyrics:
http://www.madhurabhavageethegalu.blogspot.com/2012/10/ninna-hoo-banadalli.html

No comments:

Post a Comment

Note: Only a member of this blog may post a comment.