ಜಾಲಿ ಬಾರಿನಲ್ಲಿ...

- ಬಿ. ಆರ್. ಲಕ್ಷ್ಮಣ್ ರಾವ್
ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು ||
ಗುಂಡು ಹಾಕೊ ಗೋಪಿ, ನನಗ್ ಸಾಕಪ್ಪ ಕಾಪಿ
ಚಿಕನ್ ಬಿರಿಯಾನಿ, ಏಕ್ ಲೋಟ ತಂಡ ಪಾನಿ

ಜಾಜಿತಾನದ ಹೊಳಗೆ ತೇಲಿ ಬಂದಳು ಕ್ಯಾಬರಿ
ಬಂಗೊತಾಣದ ಅಲೆಗೆ ತೋರಿ ಅರೆ ದಿಗಂಬರಿ
ಗಾಂಡಲೀನಳು ಮಧು ಭಾಂಡದಂತವಳು
ಬಿಟ್ಟ ಕಣ್ಣು ಬಾಯಿ ಗೋಪಿ ಗುಮ್ಮಾದನು
ಅವಳು ಜಗಿಯುತಿದ್ದ ಚೆವಿಂಗ್ ಗಮ್ಮಾದನು

ಗುಂಡು ಗುಂಡು ಗಾಂಡಲೀನ ಕ್ಯಾಬರಿ ಸುತ್ತ
ತನ್ನ ಅಂಗೋಪಾಂಗಗಳ ತಾನೇ ನೇವರಿಸುತ್ತ
ನಿಧ ನಿಧಾನವಾಗಿ ವಿಧ ವಿಧಾನವಾಗಿ
ಬತ್ತಲಾಗುತಿರಲು ಗೋಪಿ ಕಲ್ಲಾದನು
ರಂಭೆಯನ್ನು ಕಂಡ ಋಷಿಯು ತ್ರಿಲ್ಲಾದನು

ಗಾಂಡಲೀನಾ ಗೋಪಿಯ ಬಳಿ ತೊನೆದು ಬಂದಳು
ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು
ತುಂಬು ಕೆನ್ನೆ ಮೇಲೆ ತುಟಿ ಬಿಂಬಿಸಿದಳು ಬಾಲೆ
ಬುರ ಬುರ ಬುರ ಊದಿ ಗೋಪಿ ಗುಂಡವಾದನು
ಮಾದ್ರಿ ಅಪ್ಪಿದಾಗಿದಂತ ಪಾಂಡುವಾದನು

ಕಟ್ಟಕಡೆಯ ತುತ್ತ ತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಆ ವೆಂಕಟ ಸುಬ್ಬಿ, ಹೆಂಡ್ತಿ ನೆನಪು ಡಬ್ಬಿ
ಗಾಂಡಲೀನಳ ಪಾದ ಪದ್ಮ ಕಡೆ ಬಿದ್ದನು
ಪರನಾರಿ ಸಹೋದರನು ಕಾಮ ಗೆದ್ದನು

Video link:
http://www.youtube.com/watch?v=jQBcRuSQBwU 
English lyrics:
http://www.madhurabhavageethegalu.blogspot.com/2012/08/jaali-baarinalli.html

2 comments:

  1. ತುಂಬಾ ಧನ್ಯವಾದಗಳು !!!

    ReplyDelete
    Replies
    1. ನನ್ನ ಬ್ಲಾಗ್ಗಿಗೆ ಬೇಟಿ ಮಾಡಿದಕ್ಕೆ ಧನ್ಯವಾದ!

      Delete

Note: Only a member of this blog may post a comment.