ಸುಬ್ಬ ಭಟ್ಟರ ಮಗಳೇ...

- ಬಿ. ಆರ್. ಲಕ್ಷ್ಮಣ್ ರಾವ್
ಸುಬ್ಬ ಭಟ್ಟರ ಮಗಳೇ, ಇದೆಲ್ಲ ನಂದೇ ತೊಗೊಳ್ಳೆ ||
ನೀಲಿ ನೈಲೆಕ್ಸ್ ಸಿನ ಮೇಘ ವಿನ್ಯಾಸದ ಆಕಾಶದ ಸೀರೆ, ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕ್ಕೆ ಎಡೆಯೆಲ್ಲಿ ?

ರಾತ್ರಿ ತೆರೆಯೂ ಅದೂ ನನ್ನದೆ
ಜಿಗಿ ಜಿಗಿ ಒಡವೆದು ಕಾನು, ಆರಿಸಿಕೋ ಬೇಕೇನು
ಚಿಕ್ಕೆ ಮೂಗುತಿಗೆ ಚಂದ್ರ ಪದಕಕ್ಕೆ
ನೀಹಾರಿಕೆ ಹಾರ, ನನ್ನ ಸಂಪತ್ತೆಷ್ಟು ಅಪಾರ !

ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು, ಇನ್ನು ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ
ಸಪ್ತವರ್ಣದ ಕಮಾನು, ನಿನಗೇ ಅಗೋನು !

ಪಾತರಗಿತ್ತಿಯ ಪಕ್ಕವನೇರಿ
ಬೂಪಟ ಕಾನಿಗೆ ಹಾರಿ, ಪ್ರಾಯದ ಮಧು ಹೀರಿ
ಜುಳು ಜುಳು ಹರಿಯುವ ಕಾಲದ ಹೊಳೆಯೆ
ತೇಲುವ ಮುಳು ಮುಳುಗಿ, ದಿನಾ ಹೊಸತನದಲಿ ಬೆಳಗಿ

Video link:
http://www.youtube.com/watch?v=8nm4JkYeE0Q
Poet reciting his poem at 1:09
http://www.youtube.com/watch?v=uWZSVTp8WU4
Audio link:
http://www.kannadaaudio.com/Songs/Bhaavageethe/home/SubbabhattaraMagale.php
English lyrics:
http://www.madhurabhavageethegalu.blogspot.com/2012/07/subba-bhattara-magale.html

No comments:

Post a Comment

Note: Only a member of this blog may post a comment.