ಬದುಕು ಮಾಯೆಯ ಮಾಟ...

- ದ.ರಾ. ಬೇಂದ್ರೆ
ಬದುಕು ಮಾಯೆಯ ಮಾಟ ಮಾತು ನೊರೆ ತೆರೆಯಾಟ
ಜೀವ ಮೌನದ ತುಂಬ ತುಂಬ ಮುನ್ನೀರು ||
ಕರುಣೋದಯದ ಕೂಡ ಅರುಣೋದಯವು ಇರಲು
ಎದೆಯು ತುಮ್ಬುತ್ತಲಿದೆ ಹೊಚ್ಚ ಹೊನೀರು

ನಿಜದಲ್ಲೇ ಒಲವಿರಲಿ ಚೆಲುವಿನಲೇ ನಲಿವಿರಲಿ
ಒಳಿತಿನಲೇ ಭಲವಿರಲಿ ಜೀವ ಕೆಳೆಯ
ದೇವ ಜೀವನ ಕೇಂದ್ರ ಒಬ್ಬೊಬ್ಬನು ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯ

ಆತನಾಕೆಯೆ ನಮ್ಮ ಜೀವ ನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು ಒಂದೆ ತಾನಿನ ತಾನು
ತಾಳ ಲಯ ರಾಗಗಳು ಸಹಜ ಬರಲಿ

Video link:
http://www.youtube.com/watch?v=DO44F6bTMgo 
English lyrics:
http://www.madhurabhavageethegalu.blogspot.com/2012/08/baduku-mayeya-mata.html

No comments:

Post a Comment

Note: Only a member of this blog may post a comment.