ಬರುವಳೆನ್ನ ಶಾರದೆ...

- ಕೆ.ಎಸ್. ನರಸಿಂಹಸ್ವಾಮಿ
ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ ||
ಹಿಂದೆ ಮುಂದೆ ನೋಡದೆ ಎದುರು ಮಾತನಾಡದೆ

ಕೋಣೆಯೊಳಗೆ ಬಳೆಯ ಸದ್ದು ನಗುವರತ್ತೆ ಬಿದ್ದು ಬಿದ್ದು
ಸುಮ್ಮನಿರಲು ಮಾವನವರು "ಒಳಗೆ ಅಕ್ಕ ಭಾವನವರು"
ಎಂದು ತುಂಟ ಹುಡುಗನು ಗುಟ್ಟ ಬಯಲಿಗೆಳೆವನು

ಒಂದು ಹೆಣ್ಣಿಗೊಂದು ಗಂಡು ಹೇಗೊ ಸೇರಿ ಹೊಂದಿಕೊಂಡು
ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತ ಉಂಡು
ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ?

ಯಾರು ಕದ್ದು ನುಡಿದರೇನು ಊರೇ ಎದ್ದು ಕುಣಿದರೇನು?
ಜನರ ಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮ ರಾಗ
ಇಂತ ಕೂಗನಳಿಸಿದೆ ಬೆಳಗಿ ಬದುಕ ಹರಿಸಿದೆ

ಇಂದೆ ಅದಕೆ ಕರೆವುದು ನನ್ನ ಹುಡುಗಿ ಎನುವುದು
ಹೂವ ಮುಡಿಸಿ ನಗುವುದು ಅಪ್ಪಿ ಮುತ್ತನಿಡುವುದು
ಬಾರೆ ನನ್ನ ಶಾರದೆ ಬಾರೆ ಅತ್ತ ನೋಡದೆ

Audio link:
http://www.dhingana.com/baare-nanna-sharade-song-mysore-mallige-kannada-2ec25b1#/baare-nanna-sharade-song-mysore-mallige-kannada-2ec25b1

English lyrics:
http://www.madhurabhavageethegalu.blogspot.com/2012/12/baruvalenna-sharade.html 

No comments:

Post a Comment

Note: Only a member of this blog may post a comment.