ಮನಸೇ ನನ್ನ ಮನಸೇ...

- ಬಿ.ಆರ್. ಲಕ್ಷ್ಮಣ್ ರಾವ್
ಮನಸೇ ನನ್ನ ಮನಸೇ ಏನಾಗಿದೆ ನಿನಗೆ?
ಏಕೆ ಅವಳ ಕಹಿ ನೆನಪೇ ಜೇನಾಗಿದೆ ನಿನಗೆ?

ಬೇಡವೆಂದರೂ ಏಕೆ ತರುವೆ ಕಣ್ಮುಂದೆ ಅವಳ ಚಿತ್ರ?
ಬೂಟಾಟಿಕೆ ಆ ನಾಟಕ ಅವಳ ವಿವಿಧ ಪಾತ್ರ

ಪದೇ ಪದೇ ಮತ್ತದೇ ಜಾಗಕ್ಕೆ ನನ್ನ ಸೆಳೆವೆಯೇಕೆ?
ಕಂಡು ಮರುಗಲು ಕುಸಿದ ಅರಮನೆ ಉರುಳಿದ ಪ್ರೇಮ ಪತಾಕೆ

ಮಣ್ಣಾಗಿದೆ ನನ್ನ ಪ್ರೀತಿ ಹೃದಯದ ಗೋರಿಯಲ್ಲಿ
ಗೊರಿಯನ್ನೇಕೆ ಬಗೆಯುವೆ ಮೋಹದ ಹಾರೆಯಲ್ಲಿ?

Audio link:
http://www.kannadaaudio.com/Songs/Bhaavageethe/home/Panchama.php
Englsh lyrics:
http://www.madhurabhavageethegalu.blogspot.com/2013/01/manase-nanna-manase.html

No comments:

Post a Comment

Note: Only a member of this blog may post a comment.