ಮಾನವನಾಗಿ ಹುಟ್ಟಿದ ಮೇಲೆ...

 - ಮೂಗೂರು ಮಲ್ಲಪ್ಪ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ?
ಸಾಯೋ ತನಕ ಸಂಸಾರ್ದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ನೋಡು ಒಮ್ಮೆ ಜೋಗದ ಗುಂಡಿ ||

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ
ಜೋಡಿಗೂಡಿ ಹಾಡುತಾವ  ಹಿಂದಿನ್ ಸುಖ
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ
ಮುಂದಿನವರು ಕಂಡರೆ ಸಾಕು ಸ್ವಂತ ಸುಖ

ಒಂದು ಎರಡು ಮೂರು ನಾಲ್ಕು ಆದಾವ್ ಮತ
ಹಿಂದಿನಿಂದ ಹರಿದು ಬಂದದ್ ಒಂದೇ ಮತ
ಗುಂಡಿಗ್ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
ಮುಂದೆ ಹೋಗಿ ಸೇರುವಲ್ಲಿ ಒಂದೇ ಮತ

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು
ಭೂಮಿ ತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು
ಬಾಣಾವತಿ ಬೆಡಗಿನಿಂದ ಬರ್ತಾಳ್ ನೋಡು 

ಶರಾವತಿ ಕನ್ನಡ ನಾಡ ಭಾಗೀರಥಿ
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ
ಸಾವು ನೋವು ಸುಳಿಯೋದಿಲ್ಲಿಯ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ

Video link:
http://www.youtube.com/watch?v=VhmkbRBDSgw
English lyrics:
http://www.madhurabhavageethegalu.blogspot.com/2013/04/manavanagi-huttida-mele.html  

P.S: ಇದು ಪೂರ್ಣ ಕವಿತೆಯಲ್ಲ, ಬರಿ ಹಾಡಿಗೆ ಬಳಸಿರುವ ಸಾಲುಗಳು                                               

No comments:

Post a Comment

Note: Only a member of this blog may post a comment.