ನಾನು ಬಡವಿ...

- ದ. ರಾ. ಬೇಂದ್ರೆ
ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ||
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ ಕಿವಿಗೆ ಮೆಚ್ಚಿನೋಲೆ

ಚೆಳಿಗೆ ಬಿಸಿಲಿಗೊಂದೆ ಹದ ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬಾ ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ ಕೆನ್ನೆ ತುಂಬ ಮುತ್ತ

ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು ?
ಹೊಟ್ಟೆಗಿತ್ತ ಜೀವ ಫಲವ ತುಟಿಗೆ ಹಾಲು ಜೇನು

Audio link:
http://www.kannadaaudio.com/Songs/Bhaavageethe/home/Naakutanti-DaRa-Bendre.php 
English lyrics:
http://www.madhurabhavageethegalu.blogspot.com/2012/08/naanu-badavi-aata-badava.html

No comments:

Post a Comment

Note: Only a member of this blog may post a comment.