ತರವಲ್ಲ ತಗಿ...

- ಶಿಶುನಾಳ ಶರೀಫ
ತರವಲ್ಲ ತಗಿ ನಿನ್ನ ತಂಬೂರಿ, ಸ್ವರ
ಬರದೆ ಬಾರಿಸದಿರು ತಂಬೂರಿ ||
ಸರಸ ಸಂಗೀತದ ಕುರುಹುಗಳರಿಯದೆ
ಬರದೆ ಬಾರಿಸದಿರು ತಂಬೂರಿ

ಮದ್ದಲಿ ದನಿಯೊಳು ತಂಬೂರಿ, ಅದ
ತಿದ್ದಿ ನುಡಿಸ ಬೇಕೊ ತಂಬೂರಿ
ಸಿಷ್ಟ ಸಾಧಕರ ವಿದ್ಯೆಗೆ ಒದಗುವ
ಬುದ್ದಿವಂತಗೆ ತಕ್ಕ ತಂಬೂರಿ
 
ಹಸನಾದ ಮ್ಯಾಳಕೆ ತಂಬೂರಿ, ಇದು
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳದೀಶನ ಓದು ಪುರಾಣದಿ
ಹಸನಾಗಿ ಬಾರಿಸು ತಂಬೂರಿ

Video link:
www.youtube.com/watch?v=Gw8SijItOvI
English lyrics:
http://www.madhurabhavageethegalu.blogspot.com/2012/06/tharavalla-tagi.html

No comments:

Post a Comment

Note: Only a member of this blog may post a comment.