- ಕೆ. ಎಸ್. ನರಸಿಂಹಸ್ವಾಮಿ
ಇವಳು ಯಾರು ಬಲ್ಲೆಯೇನು, ಇವಳ ಹೆಸರ ಹೇಳಲೇನು ಇವಳ ದನಿಗೆ ತಿರುಗಲೇನು, ಇವಳು ಏತಕೋ ಬಂದು ನನ್ನ ಸೆಳೆದಳು ||
ಅಡಿಯ ಮುಟ್ಟ ನೀಳ ಜಡೆ, ಮುಡಿಯ ತುಂಬ ಹೂವು ಹೆಡೆ
ಇವಳು ಅಡಿಯ ನಿಟ್ಟ ಕಡೆ, ಹೆಜ್ಜೆ ಹೆಜ್ಜೆಗೆ
ಒಂದು ದೊಡ್ಡ ಮಲ್ಲಿಗೆ
ಅಂಗಾಲಿನ ಸಂಜೆಗೆಂಪು, ಕಾಲಂದುಗೆ ಗೆಜ್ಜೆ ಇಂಪು
ಮೋಹದ ಮಲ್ಲಿಗೆಯ ಕಂಪು, ಕರೆದುದೆನ್ನನು
ನಾನು ಹಿಡಿಯ ಹೋದೆನು
ಬಂಗಾರದ ಬೆಳಕಿನೊಳಗೆ, ಮುಂಗಾರಿನ ಮಿಂಚು ಬೆಳಗೆ
ಇಳೆಗಿಳಿದಿಹ ಮೋಡದೊಳಗೆ, ಮೆರೆಯುತಿದ್ದಳು
ನನ್ನ ಕರೆಯುತಿದ್ದಳು
Video link:
http://www.youtube.com/watch?v=i0Jvr77X4lQ
English lyrics:
http://www.madhurabhavageethegalu.blogspot.com/2012/06/ivalu-yaru-balleyenu.html
No comments:
Post a Comment
Note: Only a member of this blog may post a comment.