ದೇವರೆ ಅಘಾದ...

- ಬಿ. ಆರ್. ಲಕ್ಷ್ಮಣ್ ರಾವ್
ದೇವರೆ ಅಘಾದ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೆ ಅದರ ಆಳ ಒಡೆಯಲು ||

ತೊಳಕೊಂಡು ಕುರಿಯ ಕೊಟ್ಟೆ ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ತುಳಿತಕೆ ನೀ ತಿಮಿರು ಕೊಟ್ಟೆ ತುಡಿತಕೆ ಬರಿ ಬೆಮರು ಕೊಟ್ಟೆ
ಕವಿಗೆ ನುಡಿಯ ಡಮರು ಕೊಟ್ಟೆ ಬಡಿದು ದಣಿಯಲು

ನರನಿಗೆಂದೆ ನಗೆಯ ಕೊಟ್ಟೆ ನಗೆಯೊಳು ಹಲ ಬಗೆಯ ನಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಣಲು
ಏರಲೊಂದು ಏಣಿ ಕೊಟ್ಟೆ ಕತ್ತಲೆಂದು ಹಾವ ನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಚ್ಚಿ ಕೆಡವಲು

ತಾಮಸಕ್ಕೆ ಭಲವ ಕೊಟ್ಟೆ ರಾಜಸಕ್ಕೆ ಫಲವ ಕೊಟ್ಟೆ
ಸತ್ವಕ್ಕೆ ಶಂಡತ್ವ ಕೊಟ್ಟೆ ತತ್ವ ಗೊಣಗಲು
ಕೈಯ ಕೊಟ್ಟೆ ಕೆಡವಲೆಂದು ಕಾಲು ಕೊಟ್ಟೆ ಎಡವಲೆಂದು
ಬುದ್ಧಿ ಕೊಟ್ಟೆ ನಿನ್ನನ್ನೆ ಅಲ್ಲಗಳೆಯಲು

Video link:
http://www.youtube.com/watch?v=nMP-0XQNCb8 
English lyrics:
http://www.madhurabhavageethegalu.blogspot.com/2012/09/devare-agada-ninna.html

No comments:

Post a Comment

Note: Only a member of this blog may post a comment.