ತೂಕಡಿಸಿ ತೂಕಡಿಸಿ...

- ಡಿ. ವಿ. ಗುಂಡಪ್ಪ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮಂಕುತಿಮ್ಮ ||
ತೂಕಡಿಸಿ ತೂಕಡಿಸಿ ಬಿದ್ದರು, ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಅಕ್ಷರದ ಸಕ್ಕರೆಯ ಕಹಿಯೆಂದು ತಿಳಿದು
ಪುಸ್ತಕವ ಕಸಕಿಂತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು ಹಣೆಬರಹವೆಂದು
ತೂಕಡಿಸಿ ತೂಕಡಿಸಿ ಬಿದ್ದರು, ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಹಾಕ್ಕಿಟ್ಟ ಹುಯ್ಗಂಜಿ ತುಂಡು ತಂಬಳಿಗೆ
ತಾವಿಟ್ಟರೋ ಕೊರಳ ಜೀತದ ಕತ್ತರಿಗೆ
ದಿಕ್ಕೆಟ್ಟರೋ ನರಳಿ ಜೀವಶವದಂತೆ
ತೂಕಡಿಸಿ ತೂಕಡಿಸಿ ಬಿದ್ದರು, ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಬದುಕನ್ನು ಎದುರಿಸಲು ಕಣ್ತೆರೆದು ನೋಡ
ಬೆದೆರಿಕೆಗೆ ಕೈ ಕಟ್ಟಿ ಆಳಾಗ ಬೇಡ
ಕೊಚ್ಚೆಯ ಹುಳುವಂತೆ ಕುರುಡಾಗ ಬೇಡ

Video link:
https://www.youtube.com/watch?v=iel65swtsuA
English lyrics:
http://www.madhurabhavageethegalu.blogspot.com/2014/04/tookadisi-tookadisi.html 

No comments:

Post a Comment

Note: Only a member of this blog may post a comment.